Untitled
ಕ್ಷೀರಾಬ್ಧಿ ಕನ್ನಿಕೆ ಶ್ರೀ ಮಹಾಲಕುಮಿ
ಆರಿಗೆ ವಧುವಾದೆ ಅಂಬುಜಾಕ್ಷಿ
೧]
ಶರಧಿ ಬಂಧನ ರಾಮಚಂದ್ರ ಮೂರುತಿಗೋ
ಪರಮಾತ್ಮ ಅನಂತಪದ್ಮನಾಭನಿಗೋ
ಸರಸಿಜನಾಭ ಜನಾರ್ಧನ ಮೂರುತಿಗೋ
ಎರಡು ಹೊಳೆಯ ರಂಗ ಪಟ್ಟಣವಾಸಗೋ
೨]
ಚಲುವ ಬೇಲೂರು ಚನ್ನಿಗರಾಯನಿಗೋ
ಕೆಳದಿ ಹೇಳುಡುಪಿಯ ಕೃಷ್ಣರಾಜನಿಗೋ
ಇಳೆಯೋಳು ಪಂಢರಪುರ ವಿಠ್ಠಲೇಶಗೋ
ನಳಿನಾಕ್ಷಿ ಪೆಳೋ ಬದರಿನಾರಾಯಣಗೋ
೩]
ಮಲಯಜಗಂಧಿ ಬಿಂದುಮಾಧವರಾಯಗೋ
ಸುಲಭದೇವರ ದೇವ ಪುರುಷೋತ್ತಮಗೋ
ಫಲದಾಯಕ ನಿತ್ಯ ಮಂಗಳದಾಯಕಗೋ
ಚೆಲುವೆ ನಾಚದೆ ಪೆಳೋ ಶ್ರೀವೆಂಕಟೇಶಗೋ
೪]
ಶರಣಾಗತರ ಪೋರವ ಶಾರಂಗಪಾಣಿಗೋ
ವರಗಳನೀವ ಶ್ರೀ ಶ್ರೀನಿವಾಸನಿಗೋ
ಕುರುಕುಲಾಂತಕ ನಮ್ಮ ರಾಜಗೋಪಾಲಗೋ
ಸ್ಥಿರವಾಗಿ ಪೇಳೋ ಪುರಂದರ ವಿಠ್ಠಲಗೋ
Reviews
No reviews yet.